ಪ್ರಾಥಮಿಕ
ಶಿಕ್ಷಣದಲ್ಲಿ ಗುಣಾತ್ಮಕತೆಯ
ಅಭಿವೃದ್ಧಿಗಾಗಿ ಗಣಕ ಯಂತ್ರ
ಶಿಕ್ಷಣ
ಅಗತ್ಯತೆ
&
ಅನಿವಾರ್ಯತೆ
====================================================================================================================
ಇದು
ಬದಲಾವಣೆಯ ಯುಗ.ವೇಗದ
ಯುಗ.ಸ್ಪರ್ಧಾತ್ಮಕ
ಯುಗ.
ಬದಲಾವಣೆ
ಅನಿವಾರ್ಯವೂ ಹೌದು.
ಅಗತ್ಯವೂ
ಹೌದು.ಬದಲಾಗುವ
ಕಾಲಘಟ್ಟದಲ್ಲಿ ನಾವೂ ಸಹ
ಬದಲಾಗಬೇಕಾದದ್ದು ,
ಬದಲಾವಣೆಯನ್ನು
ಬಯಸುವುದು ಸಹಜ.
ಈ
ಬದಲಾವಣೆ ಶಿಕ್ಷಣದ ಮೂಲಕ,
ಶಿಕ್ಷಣದಲ್ಲಿ
ಆಗಬೇಕಾದದ್ದು ಇಂದಿನ ಪ್ರಸ್ತುತತೆ.
ಅದರಲ್ಲಿಯೂ
ನಮ್ಮ ಜೀವನದಲ್ಲಿ ಮೊದಲ ಹಂತ
ಪ್ರಾಥಮಿಕ ಶಿಕ್ಷಣ.
ಪ್ರಾಥಮಿಕ
ಶಿಕ್ಷಣ ,ಪ್ರತಿಯೊಬ್ಬರ
ಜೀವನದ ಮಹತ್ವದ ತಳಹದಿ.ತಳಹದಿ
ಸರಿಯಾಗಿದ್ದರೆ ತಾನೇ?
ಕಟ್ಟಡವೊಂದು
ಬಹುಕಾಲ ಬಾಳುವುದು.
ಹಾಗೆ
ಬಹಳ ಕಾಲ ನಮ್ಮ ಶಿಕ್ಷಣ ಮುಂದುವರಿಯಬೇಕಾದರೆ,
ಅದಕ್ಕನುಗುಣವಾದ
ಪೂರಕ ಸಿದ್ಧತೆ ಮಾಡಿಕೊಳ್ಳ
ಬೇಕಾದ ಅಗತ್ಯವಿದೆ.
ಅದರಲ್ಲಿಯೂ
ನಮ್ಮ ದೇಶದಲ್ಲಿ ಬಹು ಅಗತ್ಯವಾಗಿ
ನಮ್ಮ ಸಂವಿಧಾನವು ಶಿಕ್ಷಣವನ್ನು
ಮೂಲಭೂತ ಹಕ್ಕನ್ನಾಗಿ ಮಾಡಿರುವುದರಿಂದ
ಪ್ರಾಥಮಿಕ ಶಿಕ್ಷಣವನ್ನು
ಗುಣಾತ್ಮಕವಾಗಿ ನೀಡಬೇಕಾದದ್ದು
ಅನಿವಾರ್ಯ.
ಅಗತ್ಯ.
ಅದರಲ್ಲಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ
ಖಾಸಗಿ ಶಿಕ್ಷಣದ ಪೈಪೋಟಿಯನ್ನು
ಎದುರಿಸಬೇಕಾದಲ್ಲಿ ಸರ್ಕಾರಿ
ಶಾಲೆಗಳು ಮೂಲಭೂತ ಅಗತ್ಯತೆಗಳ
ಜೊತೆಗೆ ,
೨೧ನೇ
ಶತಮಾನದ &ಭವಿಷ್ಯದ
ಅಗತ್ಯತೆಗಳಲ್ಲಿ ಒಂದಾದ ಗಣಕ
ಯಂತ್ರ ಶಿಕ್ಷಣವನ್ನು ನೀಡಬೇಕಾದದ್ದು
ಅನಿವಾರ್ಯ.
ಪ್ರಾಥಮಿಕ
ಶಿಕ್ಷಣದಲ್ಲಿ ಗಣಕ ಯಂತ್ರ ಮೂಲಕ
ಶಿಕ್ಷಣ ನೀಡಬೇಕಾದರೆ ,ಯಾವ
ಹಂತದಲ್ಲಿ,
ಯಾವ
ರೀತಿಯ ಶಿಕ್ಷಣ ನೀಡಬೇಕು ಎನ್ನುವುದು
ಚರ್ಚಾ ವಿಷಯ.
ಅದರಲ್ಲಿ
ಮುಖ್ಯವಾಗಿ ಒಂದನೆಯ ತರಗತಿಯಿಂದ
ನೀಡಬೇಕೇ? ಅಥವಾ
ಹಿರಿಯ ಪ್ರಾಥಮಿಕ ಅಂದರೆ ೬-೭ರ
ಹಂತದಲ್ಲಿ ನೀಡಬೇಕೆ?
ಎನ್ನುವ
ಪ್ರಶ್ನೆ ಎದುರಾದಲ್ಲಿ ಒಂದನೇ
ತರಗತಿಯಿಂದಲೇ ನೀಡಬಹುದು ಎನ್ನುವುದು
ಸಾಮಾನ್ಯ ಅಭಿಪ್ರಾಯ.
ಇದಕ್ಕೆ
ವಿರೋಧಗಳು ಬಂದರೂ ಸಹ ಒಂದನೇ
ತರಗತಿಯು ಮಗುವಿಗೆ ಹೊಸ ಜಗತ್ತನ್ನು
ಪರಿಚಯಿಸುವ ಹಂತವಾಗಿದ್ದರಿಂದ
ಅದಕ್ಕೆ ಅನುಗುಣವಾಗಿ ಈಗ ಸಾರ್ವಜನಿಕ
ಶಿಕ್ಷಣ ಇಲಾಖೆಯು ಪರಿಚಯಿಸುತ್ತಿರುವ
ಸಾರ್ವಜನಿಕ ತಂತ್ರಾಂಶ Obuntu
/Edubuntu ಬಹು
ಪೂರಕವಾಗಿದೆ.
ಇದರಲ್ಲಿ
ಆಟದ ಮೂಲಕ ಕಲಿಕೆಗೆ ಪೂರಕವಾದ
ಬಹಳಷ್ಟು ಉಪಕರಣಗಳು ಇದ್ದು,
ಇದು
ಮಗುವಿಗೆ ಕಲಿಕೆಯನ್ನು ಆಸಕ್ತಿ
ದಾಯಕವಾಗಿ ಮಾಡುವುದರಲ್ಲಿ
ಸಂಶಯವಿಲ್ಲ.ಉದಾಹರಣೆಗೆ
ಈ ತಂತ್ರಾಂಶದಲ್ಲಿ ಇರುವ ಕೆಲವು
ಆಟದ ಮೂಲಕ ಕಲಿಕಾ ಅಂಶಗಳಾದ potato
guy, childs play, ಇವು
ಮಗುವಿನ ಕುತೂಹಲವನ್ನು ಹೆಚ್ಚಿಸುವ
ಜೊತೆಗೆ ,ಕಲಿಕೆಯನ್ನು
ಫಲಪ್ರದವನ್ನಾಗಿ ಮಾಡುವುದರಲ್ಲಿ
ಸಹಕಾರಿ.
ಗಣಿತವನ್ನು
ಸಾಮಾನ್ಯವಾಗಿ ಕಿರಿಯ ಪ್ರಾಥಮಿಕ
ಹಂತದಲ್ಲಿಯೇ ಮಕ್ಕಳಿಗೆ ಕಲಿಸುವುದು
ತಿಳಿದಿದೆ.
ಸಾಮಾನ್ಯವಾಗಿ
ಗಣಿತ/ ಲೆಕ್ಕವನ್ನು
ಮಗುವಿಗೆ ಕಲಿಸುವಾಗ ಆಟದ ಮೂಲಕ
ಕಲಿಸಿದಲ್ಲಿ ಅದು ಬಹುಬೇಗ ನಿರೀಕ್ಷಿತ
ಫಲ ನೀಡುತ್ತದೆ.ಇದಕ್ಕಾಗಿ
EDUBUNTU ತಂತ್ರಾಂಶದಲ್ಲಿ
ಈ ಕೆಳಕಂಡ ಗಣಿತದ tool
ಇದ್ದು
,ಇದರ
ಬಳಕೆ ನಮ್ಮ ಇಂದಿನ ಶಿಕ್ಷಣಕ್ಕೆ
ಪೂರಕ. TUX MATH. Math
war, etc. ಇವುಗಳ
ಮೂಲಕ ಕೂಡುವ ಕಳೆಯುವ ಲೆಕ್ಕದ
ಬಗ್ಗೆ ಆಸಕ್ತಿ ಹೆಚ್ಚಿಸಬಹುದು.
ಪರಿಸರ
ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ
ಬಹು ಪರಿಣಾಮಕಾರಿಯಾಗಿ ನೀಡಿದರೆ,
ಪರಿಸರ
ಸಂರಕ್ಷಣೆ ಅರಿವು ಚಿಕ್ಕ
ವಯಸ್ಸಿನಲ್ಲಿಯೇ ಮಗುವಿಗೆ
ಮೂಡಿದರೆ, ನಾವು
ಎದುರಿಸುತ್ತಿರುವ ಹೆಚ್ಚಿನ
ಪರಿಸರ ಸಮಸ್ಯೆಗಳಿಗೆ ವಿರಾಮ
ಹಾಕಬಹುದು.
ಇದಕ್ಕಾಗಿ
ಮಗುವಿಗೆ ಕಿರಿಯ ಪ್ರಾಥಮಿಕ
ಹಂತದಿಂದಲೇ ಚಿತ್ರಕಲೆಯ ಮೂಲಕ
ಪರಿಸರ ತರಬೇತಿ ನೀಡಿದ್ದೇ ಆದಲ್ಲಿ
ಅದರ ಪ್ರಯೋಜನ ದೀರ್ಘಾವಧಿ..
ನಾವೀಗ
ಪ್ರಸ್ತುತ ಪಡಿಸುತ್ತಿರುವ
ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರ
ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿಯಾಗಿ
ನೀಡಲು EDUBUNTU
ತಂತ್ರಾಂಶದಲ್ಲಿ
Tux paint ಎನ್ನುವ
tool ಇದ್ದು
ಅದು ಮಗುವಿನ ಕಲೆಯ ಬೆಳವಣಿಗೆಯ
ಜೊತೆಗೆ ಪರಿಸರ ಪ್ರೇಮ ಹೆಚ್ಚಿಸುತ್ತದೆ.
ಮಕ್ಕಳಿಗೆ
ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು
ಪ್ರಾಥಮಿಕ ಹಂತದಿಂದ ಕೊಡಬೇಕೆ?
ಬೇಡವೇ?
ಎನ್ನುವುದು
ಇತ್ತೀಚೆಗೆ ಬಹು ವ್ಯಾಪಕವಾಗಿ
ಚರ್ಚೆಯಾಗುತ್ತಿರುವ ಅಂಶ.ಇಂಗ್ಲೀಷ್
ಶಿಕ್ಷಣವನ್ನು ,
ಕನ್ನಡ
ಶಾಲೆಗಳಲ್ಲಿ ನೀಡಬಾರದು ಎನ್ನುವವರ
ವರ್ಗ ಒಂದುಕಡೆಯಾದರೆ,
ಕಿರಿಯ
ಹಂತದಲ್ಲಿ ಆಂಗ್ಲ ಶಿಕ್ಷಣವನ್ನು
ನೀಡಿದರೆ ,
ಮಗುವಿಗೆ
ಹೊರೆಯಾಗುತ್ತದೆ ಎನ್ನುವವರ ವರ್ಗ
ಒಂದುಕಡೆ..
ಇದೆಲ್ಲದರ
ಜೊತೆಗೆ ಪ್ರಾಥಮಿಕ ಹಂತದಲ್ಲಿ
ಇಂಗ್ಲೀಷ್ ಶಿಕ್ಷಣವನ್ನು ನೀಡಲು
ತರಬೇತಿ ಹೊಂದಿದ ಶಿಕ್ಷಕರ ಕೊರತೆ
ಇದೆ , ತರಬೇತಿ
ಅಭಾವ ಇರುವ ಶಿಕ್ಷಕರು ಆಂಗ್ಲ
ಶಿಕ್ಷಣವನ್ನು ಎಷ್ಟು ಪರಿಣಾಮಕಾರಿಯಾಗಿ
ನೀಡಿಯಾರು?
ಎನ್ನುವ
ಸಂದೇಹ. ಖಾಸಗಿ
ಶಿಕ್ಷಣ ಸಂಸ್ಥೆಗಳು lkg,ukg,
ಹಂತದಲ್ಲಿಯೇ
ಇಂಗ್ಲೀಷ್ ನ್ನು ಒತ್ತಾಯ ಪೂರ್ವಕವಾಗಿ
, ಪರಿಣಾಮಕಾರಿಯಾಗಿ
ಕಲಿಸುತ್ತಿರುವಾಗ .ನಾವೇಕೆ
ಮಗುವಿಗೆ ಇದನ್ನು ನೀಡಬಾರದು?
ಎಂದಾಗ
ನಮ್ಮ ನೆರವಿಗೆ ಬರುವುದು ನಮ್ಮ
ಸಾರ್ವಜನಿಕ ತಂತ್ರಾಂಶ.
ಇದರಲ್ಲಿ
ಅಡಕವಾಗಿರುವ Artha,
kanagram,Kletters,parley,practise your english ಮೊದಲಾದ
toolಗಳು
ಇಂಗ್ಲೀಷ್ ಬಗ್ಗೆ ಆಸಕ್ತಿ ಬೆಳೆಸಲು
ಅನುಕೂಲಕರವಾಗಿವೆ.
ಆಸಕ್ತಿಯೇ
ಅಲ್ಲವೇ? ನಮ್ಮನ್ನು
ಕಲಿಕೆಯ ಕಡೆಗೆ ಸೆಳೆಯುವುದು.
ಒತ್ತಾಯದ
ಕಲಿಕೆಗೆ ಬದಲಾಗಿ ಆಸಕ್ತಿಕರವಾದ
ಆಂಗ್ಲ ಶಿಕ್ಷಣವನ್ನು ಮಗುವಿಗೆ
ಕಲಿಸಿದರೆ ಅದರಿಂದ ಮಗುವಿಗೆ
ಹಾನಿಯಾಗುವುದಕ್ಕೆ ಬದಲಾಗಿ
ಒಳಿತೇ ಅಲ್ಲವೇ?
ಚಿಕ್ಕ
ವಯಸ್ಸಿನ ಮಗುವೊಂದು ಸಾಮಾನ್ಯವಾಗಿ
ತನ್ನ ಮನೆಯ ಭಾಷೆ,
ತನ್ನ
ನೆರೆಹೊರೆಯವರ ಭಾಷೆ,ಯನ್ನು,
ಮಾಧ್ಯಮದಲ್ಲಿ
ಕಾಣಿಸುವ ಕೆಲವು ಇತರ ಭಾಷೆಗಳ
ಪದ್ಯವನ್ನು ಕಲಿಯುತ್ತದೆ ಎಂದಾದರೆ
, ಅದರ
ಜೊತೆಗೆ ಬಹು ವಿಶಾಲವಾದ ಕಿಟಕಿ
ಆಂಗ್ಲ ಮಾಧ್ಯಮದ ಮೂಲಕ ನಮ್ಮ
ಮಗುವಿಗೆ ದೊರೆತರೆ ,
ಹೆಚ್ಚು
ಗಾಳಿ ದೊರಕಿದಂತೆ ತಾನೇ?
ಇನ್ನು
ಬಹಳಷ್ಟು ಶಿಕ್ಷಕರ ಅನಿಸಿಕೆ
ಪ್ರಾಥಮಿಕ ಹಂತದಲ್ಲಿ ಸ್ಥಳ ಪರಿಚಯ,
ಅಕ್ಷಾಂಶ
,ರೇಖಾಂಶ
, ಗ್ರಹಣಗಳು
ಮೊದಲಾದ ಅಂಶಗಳನ್ನು ಮಗುವಿಗೆ
ಕೆಳಹಂತದಲ್ಲಿ ಕಲಿಸುವುದು ಕಷ್ಟಕರ
ಎನ್ನುವುದಾಗಿದೆ.ಆದರೆ
ನಾವೀಗ ಪರಿಚಯ ಮಾಡಿಕೊಂಡಿರುವ
ನಮ್ಮ edubuntu
ತಂತ್ರಾಂಶದಲ್ಲಿ
Kgeography, Marble, Open
streetmap, stellerium.kstar, ಮೊದಲಾದ
tool ಗಳು
ನಮ್ಮನ್ನು ಪರಿಣಾಮಕಾರಿ ಪಾಠಬೋಧನೆಗೆ
ತೊಡಗಿಸುತ್ತವೆ ಎಂದರೆ ತಪ್ಪಾಗಲಾರದು
ಇದರ ಜೊತೆಗೆ ಪ್ರಾಥಮಿಕ ಹಂತದಲ್ಲಿ
ಅಂತರ್ಜಾಲದ ಮೂಲಕ ನಮ್ಮ ವಿಶ್ವದ
ಯಾವುದೇ ಮೂಲೆಯಿಂದ ಮಾಹಿತಿಗಳನ್ನು
ಬಹುವೇಗವಾಗಿ ಪಡೆದು ಮಗುವಿಗೆ
ಕಲಿಸಬಹುದಾಗಿದ್ದು ಇದು edusat
ಕಲಿಕೆಗೆ
ಪೂರಕವಾಗಬಹದು.
ಬನ್ನಿ
, ಬದಲಾವಣೆ
ತರೋಣ. ಬದಲಾಗೋಣ,
ಬದಲಾಯಿಸೋಣ.ಇದು
ಕೇವಲ ಆರಂಭ.
ಭವಿಷ್ಯದ
ಅವಶ್ಯಕತೆಗಳನ್ನು ಇಂದೇ ನೀಗಿಸೋಣ.
ಸಮಸ್ಯೆಗಳನ್ನು
ಪರಿಹರಿಸೊಣ.
ಇದಕ್ಕೆ
ನಮ್ಮ ನಿಮ್ಮೆಲ್ಲರ ಸಹಕಾರ ಅಗತ್ಯ.
ಸಹಕಾರದ
ನಿರೀಕ್ಷೆಯಲ್ಲಿ
- ನಿಮ್ಮವನು
ಭಾಮ.
Feed
back: bhagwatmc@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ