ಮಂಗಳವಾರ, ಜನವರಿ 8, 2013

ಶಿಕ್ಷಕರ ಶಿಕ್ಷಣದಲ್ಲಿ ವಿಷಯವೇದಿಕೆ ಪಾತ್ರ.
೨೦೧೧-೧೨ ನೇ ಸಾಲಿನಿಂದ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ವಿಷಯ ವೇದಿಕೆ ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ರಚಿಸಲಾಗಿದೆ.ಜೊತೆಗೆ ಭಾಷಾ ಶಿಕ್ಷಕರ ವೇದಿಕೆ,ಚಿತ್ರಕಲಾ ಶಿಕ್ಷಕರ ವೇದಿಕೆ ಸಹ ರಚಿಸಲಾಗುತ್ತಿದೆ.ವಿಷಯ ವೇದಿಕೆ ಮೂಲಕವಾಗಿ ಶಿಕ್ಷಕರು ರಾಜ್ಯದಾದ್ಯಂತ ತಮ್ಮ ವೃತ್ತಿಜೀವನದಲ್ಲಿ ಬೋಧನೆಗೆ ಅನುಕೂಲಕರವಾದ ಮಾಹಿತಿಗಳನ್ನು ಪಡೆದುಕೊಳ್ಳುವ ತರಬೇತಿ ನೀಡಲಾಗುತ್ತಿದೆ.ಇದರ ಜೊತೆಗೆ ಸಾರ್ವಜನಿಕ ತಂತ್ರಾಂಶ Edubuntu 12.04 ನ್ನು ಪರಿಚಯಿಸಲಾಗಿದೆ.ಇದಕ್ಕಾಗಿ ಡಯಟ್ ಗಳ ಮೂಲಕ 05 ದಿನಗಳ ಸನಿವಾಸ ತರಬೇತಿ ನೀಡಲಾಗುತ್ತಿದೆ.ತರಬೇತಿ ಪಡೆಯುವುದು ಮುಖ್ಯವಲ್ಲ.ತರಬೇತಿಯನ್ನು  ಮುಂದುವರಿಸುವುದು ಮುಖ್ಯ.

ನಿಮ್ಮವನು 
ಭಾಗ್ವತ್.
bhagwatmc@gmail.com

ಮಾನವೀಯತೆ ಏನಾಗಿದೆ ನಿನಗೆ?

ಕುಸಿಯುತ್ತಿರುವ ಮಾನವೀಯ ಮೌಲ್ಯ
ದೆಹಲಿ ಅತ್ಯಾಚಾರ ಘಟನೆಯ ಕುರಿತಾಗಿ ದೂರದರ್ಶನ ವಾಹಿನಿಯಲ್ಲಿ ಬರುತ್ತಿದ್ದ ಕಾರ್ಯಕ್ರಮ ನೋಡಿದ ಮೇಲೆ ಅನಿಸಿದ್ದು , ಅಸಹಾಯಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಹಾಗೂ ,ಆಕೆಯ ಸ್ನೇಹಿತರಿಗೆ ದೆಹಲಿಯಂಥ ಮುಂದುವರಿದ ನಗರಗಳಲ್ಲಿ ಸಕಾಲಕ್ಕೆ ನೆರವು ಸಿಗದೆ,ನೀಡದೆ ಇರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸ್ಥಿತಿ.  ೯ನೇ ತರಗತಿಯಲ್ಲಿನ ಕನ್ನಡ ಪದ್ಯ ಒಂದು ನೆನಪಾಗುತ್ತಿದೆ

ಮಾನವೀಯತೆ ಏನಾಗಿದೆ ನಿನಗೆ?